ಶೈಕ್ಷಣಿಕ ಹರಿಕಾರ ಡಾ. ಅಚ್ಯುತ್ ಸಮಂತಗೆ ’ಯಂಗ್ ಎಡ್ಜ್- ೨೦೧೦’ ಪುರಸ್ಕಾರ
ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಎಡ್ಜ್ ಶೈಕ್ಷಣಿಕ ಸಂಘಟನೆ ಕೊಡಮಾಡುವ ಪ್ರತಿಷ್ಠಿತ ’ಯಂಗ್ ಏಡ್ಜ್ ೨೦೧೦’ ಪ್ರಶಸ್ತಿಗೆ ಈ ಬಾರಿ ಶೈಕ್ಷಣಿಕ ರಂಗದ ವಿಶಿಷ್ಟ ಸಾಧಕ ಕೆಐಐಟಿ ಶಿಕ್ಷಣ ಸಮೂಹ, ಕೆಐಐಟಿ ವಿಶ್ವವಿದ್ಯಾಲಯ ಹಾಗೂ ಕಳಿಂಗ ಇನ್ಸ್‌ಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಸಂಸ್ಥಾಪಕ ಡಾ. ಅಚ್ಯುತ್ ಸಮಂತ ಭಾಜನರಾಗಿದ್ದಾರೆ.
ನವದೆಹಲಿಯ ಇಂಡಿಯಾ ಹ್ಯಾನಿಟೇಟ್ ಸೆಂಟರ್‌ನಲ್ಲಿ ನಡೆದ ಎಡ್ಜ್ ಸಮಾವೇಶದಲ್ಲಿ ಗುರುವಾರ ಪ್ರಶಸ್ತಿ ಪ್ರೊ. ಯಶಪಾಲ್ ಪ್ರಧಾನ ಮಾಡಿದರು.
ಒರಿಸ್ಸಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಬುಡಕಟ್ಟು ಜನಾಂಗದ ಲಕ್ಷಾಂತರ ಮಂದಿ ಕಡು ಬಡವರಿಗೆ ವಸತಿ ಆಹಾರ ಸಹಿತ ಉಚಿತ ಶಿಕ್ಷಣ ನೀಡುತ್ತಿರುವ ಸಮಂತ್ ಅವರ ಸಾಮಾಜಿಕ ಕಳಕಳಿ ಹಾಗೂ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಯಂಗ್ ಎಡ್ಜ್ ಪುರಸ್ಕಾರ ನೀಡಲಾಗಿದೆ.
ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿ ಬಡತನಕ್ಕೆ ಅನಕ್ಷರತೆಯೇ ಮೂಲ ಎಂಬುದನ್ನು ಅರಿತು, ಶಿಕ್ಷಣ ವ್ಯವಸ್ಥೆಯಲ್ಲಿ ಸೇವೆಗೆ ಕಂಕಣ ತೊಟ್ಟ ಡಾ. ಸಮಂತ್. ಇಂದು ತಮ್ಮ ಕನಸು ನನಸಾಗಿಸಿಕೊಂಡಿದ್ದಾರೆ.
ಕೆಐಐಟಿ ಶಿಕ್ಷಣ ಸಂಸ್ಥೆ ಮೂಲಕ ದೇಶದ ಉದ್ದಗಲಕ್ಕೂ ತಮ್ಮ ಸೇವೆಯನ್ನು ವಿಸ್ತರಿಸಿಕೊಂಡಿದ್ದಾರೆ.
ಅಚ್ಯುತ್‌ರ ಅಪೂರ್ವ ಸಾಧನೆಯನ್ನು ಪರಿಗಣಿಸಿರುವ ಎಡ್ಜ್ ಸಂಘಟನೆ ಪ್ರಶಸ್ತಿ ಪಟ್ಟಿಯಲ್ಲಿ ಅವರಿಗೆ ಅಗ್ರ ಸ್ಥಾನ ನೀಡಿದೆ.
ಎಡ್ಜ್ ವರ್ಷದ ವ್ಯಕ್ತಿಯಾಗಿ ಯಶ್‌ಪಾಲ್
ಇದೇ ವೇಳೆ ೨೦೧೦ ರ ಎಡ್ಜ್ ವಾರ್ಷಿಕ ಪ್ರಶಸ್ತಿಯನ್ನು ಪ್ರೊ. ಯಶಪಾಲ್ ಅವರಿಗೆ ನೀಡಿ ಗೌರವಿಸಲಾಯಿತು.
ಉನ್ನತ ಶಿಕ್ಷಣ ಬದಲಾವಣೆ ಕುರಿತು ಕೆಂದ್ರ ಸರ್ಕಾರ ರಚಿಸಿರುವ ಯಶಪಾಲ್ ಕಮಿಟಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ ತರಬೇಕೆಂಬ ವರದಿ ನೀಡಿದ್ದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಎರಡು ದಿನಗಳ ಕಾಲ ನಡೆದ ಎಡ್ಜ್ ಸಮಾವೇಶದಲ್ಲಿ ಅಮೆರಿಕದ ೨೦ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಹಾಗೂ ಭಾರತದ ವಿವಿಗಳ ಹಲವು ಪ್ರತಿನಿಧಿಗಳು ಪಾಲ್ಗೊಂಡು ಉನ್ನತ ಶಿಕ್ಷಣ ವಲಯದ ಸಾಧಕ ಬಾದಕಗಳನ್ನು ಚರ್ಚಿಸಿದರು.
ಏನಿದು ಏಡ್ಜ್ ?
ಎಡ್ಜ್, ಇದು ಉನ್ನತ ಶಿಕ್ಷಣ ಅಭಿವೃದ್ಧಿ ಪಡಿಸಲು ವಿವಿಧ ಶಿಕ್ಷಣ ಸಂಸ್ಥೆಗಳು ಒಗ್ಗೂಡಿ ರಚಿಸಿಕೊಂಡಿರುವ ಒಂದು ಶೈಕ್ಷಣಿಕ ಸಂಘಟನೆ.
ಆರಂಭವಾಗಿದ್ದು ೨೦೦೭ರಲ್ಲಿ. ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುವ, ಗುಣಮಟ್ಟದ ಶಿಕ್ಷಣ ನೀತಿ ಚಿಂತನೆ ಹುಟ್ಟುಹಾಕುವ, ಹಾಗೂ ಪ್ರತಿಭಾವಂತರ ಚಿಂತನೆಗಳಿಗೆ ವೇದಿಕೆ ಕಲ್ಪಿಸಿಕೊಡುವ ಮೂಲಕ ಉನ್ನತ ಶಿಕ್ಷಣದ ಅಭಿವೃದ್ಧಿಗೆ ಶ್ರಮಿಸುತ್ತಿದೆ.
ವಿಶ್ವದ ಇತರೆ ದೇಶಗಳ ಉನ್ನತ ಶಿಕ್ಷಣದಲ್ಲಿ ಆಗಿರುವ ಬದಲಾವಣೆಗಳನ್ನು ದೇಶದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಉನ್ನತ ಶಿಕ್ಷಣದ ಉನ್ನತೀರಕರಣಕ್ಕಾಗಿ ಸಮ್ಮೇಳನ, ಸಮಾವೇಶ, ಹಾಗೂ ಪ್ರಶಸ್ತಿಗಳನ್ನು ನೀಡುವ ಮೂಲಕ ದೇಶದ ಉನ್ನತ ಶಿಕ್ಷಣ ಬದಲಾವಣೆ ತರಲು ತೊಡಗಿಸಿಕೊಂಡಿರುವ ಸಂಸ್ಥೆಯೇ ಎಡ್ಜ್. ಉನ್ನತ ಶಿಕ್ಷಣಕ್ಕೆ ಕೊಡುಗೆ ನೀಡಿದವರನ್ನು ಗುರ್ತಿಸಿ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ ಈ ಸಂಸ್ಥೆ.
ಉನ್ನತ ಶಿಕ್ಷಣ ಬದಲಾವಣೆಗೆ ಅಮೂಲಾಗ್ರ ಕೊಡುಗೆ ನೀಡಿದವರಿಗೆ ಎಡ್ಜ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಉನ್ನತ ಶಿಕ್ಷಣಕ್ಕೆ ಉನ್ನತ ಕೊಡುಗೆ ನೀಡಿದ ರಾಷ್ಟ್ರೀಯ ಜ್ಞಾನ ಆಯೋಗದ ದ ಅಧ್ಯಕ್ಷ
ಶ್ಯಾಮ್ ಪಿತ್ರೋಡಾ ಅವರು ೨೦೦೮ ಎಡ್ಜ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
೧೧ನೇ ಪಂಚವಾರ್ಷಿಕ ಯೋಜನೆಯಲ್ಲಿ ಶೈಕ್ಷಣಿಕ ಪ್ರಗತಿಗೆ ಅತ್ಯುತ್ತಮ ಯೋಜನೆ ರೂಪಿಸಿ ಕಾಣಿಕೆ ನೀಡಿದ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರಿಗೆ ೨೦೦೯ರ ಎಡ್ಜ್ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಯಂಗ್ ಎಡ್ಜ್ ಅವಾರ್ಡ್:
ಶಿಕ್ಷಣದ ಅಮೂಲಾಗ್ರ ಬದಲಾವಣೆಗೆ ಶ್ರಮಿಸುತ್ತಿರುವ ಎಡ್ಜ್ ಸಂಘಟನೆ ಯಂಗ್ ಎಡ್ಜ್ ಅವಾರ್ಡ್ ನೀಡುತ್ತಿದ್ದು, ಶೈಕ್ಷಣಿಕ ರಂಗದಲ್ಲಿ ಸಾಧನೆ ಮಾಡಿರುವ ಯುವ ಶಿಕ್ಷಕರು, ವಿಜ್ಞಾನಿಗಳು, ಕಲಾವಿದರು, ತಂತ್ರಜ್ಞರು, ಉದ್ಯಮಿಗಳು, ಯುವ ವ್ಯವಸ್ಥಾಪಕರಿಗಾಗಿ ಈ ಪ್ರಶಸ್ತಿ ಸ್ಥಾಪಿಸಲಾಗಿದೆ. ಸಾಧನೆ ಕ್ಷೇತ್ರ, ಅದು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬೀರಿರುವ ಪ್ರಭಾವ ಆಧರಿಸಿ ಈ ಪ್ರಶಸ್ತಿ.
ಎಡ್ಜ್ ಬೆನ್ನೆ ಹಿಂದೆ...
ಇಸ್ರೋ ಮಾಜಿ ಮುಖ್ಯಸ್ಥ, ಕೇಂದ್ರ ಯೋಜನಾ ಆಯೋಗದ ಅಧ್ಯಕ್ಷ ಡಾ. ಕೆ. ಕಸ್ತೂರಿ ರಂಗನ್, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೋ. ಪಿ ಬಲರಾಂ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಂಜೂಂದಾರ್ ಷಾ, ಮಣಿಪಾಲ್ ಶಿಕ್ಷಣ ಸಂಸ್ಥೆಯ ಡಾ. ರಾಮದಾಸ್ ಪೈ ಸೇರಿದಂತೆ ಹಲವು ಪ್ರಮುಖರು ಎಡ್ಜ್ ಸಂಘಟನೆಯ ಹಿಂದಿರುವ ಶಕ್ತಿಗಳು.
ಹೆಚ್ಚಿನ ವಿವರಗಳನ್ನು
www.edgeforum.in
http://www.achyutasamanta.com
http://www.kissorissa.org
http://www.kiit.ac.in
ನಲ್ಲಿ ಪಡೆಯಬಹುದು.